Posts

Showing posts from April, 2020

ಮನಸ್ಸಿದ್ದರೆ ಮಾರ್ಗ

Image
ಮನಸ್ಸಿದ್ದರೆ ಮಾರ್ಗ ವಿಶ್ವವೇ ಕಾತರದಿಂದ ಆತನತ್ತ ನೋಡುತ್ತಿದೆ. ಆತನ ಒಂದು, ಒಂದೇ ಒಂದು, ಕಾರ್ಯ ಆತನನ್ನು ಅದ್ಭುತ ಹೀರೋ ಆಗಿಸಬಲ್ಲುದು. ಕೊಂಚ ಎಚ್ಚರ ತಪ್ಪಿದರೂ ಸಾಕು, ಸ್ವಲ್ಪ ಗುರಿ ತಪ್ಪಿದರೂ ಸಾಕು, ಆತನ ವೈಫಲ್ಯ ಪೂರ್ತಿ ದೇಶದ ಮಾನ ತೆಗೆಯಬಲ್ಲುದು. ಜಗತ್ತಿಗೆ ಆತ ಒಬ್ಬ ಫ್ಲಾಪ್ ವ್ಯಕ್ತಿ ಎಂದೆನಿಸಿಬಿಡುತ್ತಾನೆ. ಅಷ್ಟೇ ಅಲ್ಲ, ಇಡೀ ಕೂಟಕ್ಕೇ ಕಪ್ಪು ಚುಕ್ಕಿಯಾಗಿ ಉಳಿದುಬಿಡುತ್ತದೆ... ಆತನಿಗೂ ಅದರ ಅರಿವಿದೆ. ಆತ ಹಿಂಜರಿಯಲಿಲ್ಲ, ಕಂಗೆಡಲಿಲ್ಲ. "ಧೈರ್ಯಂ ಸರ್ವತ್ರ ಸಾಧನಂ" ಎನ್ನುವುದನ್ನು ಅರಿತು, ಯಾವುದೇ ರೀತಿಯ ದುಗುಡಕ್ಕೆ ಒಳಗಾಗದೇ ತನ್ನ ಪಾಲಿಗೆ ಬಂದ ಕೆಲಸವನ್ನು ಶ್ರದ್ಧೆಯಿಂದ ಮಾಡಿದ. ಆತ ಗುರಿ ತಪ್ಪಲಿಲ್ಲ. ನೆರೆದಿದ್ದ ಸಾವಿರಾರು ಜನರ ನಿರೀಕ್ಷೆಯನ್ನು, ತನ್ನ ನಾಡಿನವರು ತನ್ನ ಮೇಲಿಟ್ಟ ಭರವಸೆಯನ್ನು, ಆತ ಹುಸಿ ಮಾಡಲಿಲ್ಲ. ಇಡೀ ಜಗತ್ತೇ ಆತನ ಸಾಧನೆಯನ್ನು ಕೊಂಡಾಡಿತು. ಆ ಕಾರ್ಯಕ್ರಮ "ನ ಭೂತೋ ನ ಭವಿಷ್ಯತಿ" ಎಂದೆನಿಸಿ ಇತಿಹಾಸದ ಸುವರ್ಣಾಕ್ಷರಗಳಲ್ಲಿ ದಾಖಲಾಯಿತು. ನಾನು ಹೇಳುತ್ತಿರುವುದು ಯಾವುದರ ಬಗ್ಗೆ ಎಂದು ಈಗಾಗಲೇ ನಿಮಗೆ ಗೊತ್ತಾಗಿರಬಹುದು. ಅದು ೧೯೯೨ರ ಜುಲೈ ೨೫ರಂದು ಬಾರ್ಸಿಲೋನಾದಲ್ಲಿ ನಡೆದ ಓಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ. ಆಂಟೋನಿಯೋ ರೆಬೋಲ್ಲೋ ಎಂಬ ಪ್ಯಾರಾಲಿಂಪಿಕ್ ಬಿಲ್ಲುಗಾರ ತನಗೆ ನೀಡಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ, ಆ ದಿನವನ್ನು ಅವಿಸ್ಮರಣೀಯವಾಗಿಸಿದ್

KSGEA

Image